Thursday, March 29, 2012

ಇದೇನಿದು?


ಮನದಾಗಸದಲಿ ತೇಲಾಡುತಿರುವ ಬಾನಾಡಿ
ಹಾಡುತಿದೆ ಪ್ರೇಮರಾಗವನು
ತಾಳ ತಪ್ಪುತಿದೆ, ಶೃತಿ ಸೇರದೆ
ಕಂಡು ಪುಳಕಿತಗೊಂಡಿದೆ ಮನ, ಮಾಯಾಮೃಗವನು



ನಿನ್ನೆ ಕಂಡ ಸ್ವಪ್ನವಿಂದು ನನಸಾಗುವ ಬಯಕೆ
ಸಾಧ್ಯವಿಲ್ಲವಿದಾದರೂ ಇರಲಿ ನಿನ್ನ ಹಾರೈಕೆ
ಪಡೆಯುವ ಛಲವಿದೆ, ಆತ್ಮವಿಸ್ವಾಸವಿದೆ,
ನನಗಿಲ್ಲ ಹೆದರಿಕೆ ನನಗೆ ನಿನ್ನ ಜೊತೆಯಿದೆ



 

No comments:

Post a Comment