ತವರು

ಪ್ರಣವ ಸಮುಚ್ಛಯ!
                         ಹೌದು, ಪ್ರಣವ ಸಮುಚ್ಛಯ ಎಂಬ ಹೆಸರಿನಿಂದ ಒಂದು ವರ್ಷದ ಹಿಂದೆ ಚೂರು ಪಾರು ಗುರುತಿಸಿಕೊಂಡಿದ್ದ  ನನ್ನ ಬ್ಲಾಗ್ ಗೆ  ಮರುನಾಮಕರಣ ಮಾಡಿದ್ದೇನೆ'ಪ್ರಣವಚಿತ್ತ ಮಂಥನ' ವೆಂದು....

       ಒಂದು ರೀತಿ ಹೇಳಬೇಕೆಂದರೆ, ನನ್ನ ಬ್ಲಾಗಿನಂತೆಯೇ, ನನ್ನೊಳಗಿನ ಕವಿಗೂ ಇಂದು ಪುನರ್ಜನ್ಮವಾಗಿದೆಯೆಂದರೆ ತಪ್ಪಾಗಲಾರದು.
    
     "ಇಷ್ಟು ದಿನ ಎಲ್ಲಿ ಅದೃಶ್ಯವಾಗಿದ್ದೆಯಪ್ಪ? ಸುಳಿವೇ ಇರಲಿಲ್ಲ" ಎಂದು ನಿಮ್ಮಲ್ಲಿ ಹಲವರು ನನ್ನನ್ನು ಪ್ರಶ್ನಿಸಬಹುದು; ಒಂದು ವರ್ಷದ ಕಾಲ ಬ್ಲಾಗ್ ಕಡೆಗೆ ಕಣ್ನನ್ನೂ ಹಾಯಿಸಿರಲಿಲ್ಲ. ಕಾರಣ, ಓದಿನ ಒತ್ತಡವೆಂದರೆ ಮಹಾಪರಾಧವಾದೀತು! ಆದರೂ ಅದನ್ನೇ ನೆಪವಾಗಿಸಿಕೊಂಡು ಯಾವುದೇ ಕಥೆ ಕವನಗಳನ್ನು ಬರೆಯಲಾಗಲಿಲ್ಲ

      ಆದರೆ ಚಡಪಡಿಸುತ್ತಿದ್ದ ನನ್ನೊಳಗಿನ ಕವಿ ಎಷ್ಡು ದಿನ ತಾನೇ ಸುಮ್ಮನಿದ್ದಾನು? ಪಂಜರದ ಗಿಳಿಯಂತೆ ಹೊರಹಾರಲು ಕಾಯುತ್ತಿದ್ದ. ಇಂದು ಏನನ್ನೂ ಲೆಕ್ಕಿಸದೆ, ಪಂಜರದ ಸರಳನ್ನು ಕಡಿದು, ಸಾಹಿತ್ಯಲೋಕದ; ಸ್ವಕಪೋಲಕಲ್ಪನಾಲೋಕದ ಆಗಸದಲ್ಲಿ ಸ್ವಚ್ಛಂದವಾಗಿ ರೆಕ್ಕೆಬಡಿದು ಹಾರಾಡಲನುವಾಗಿದ್ದೇನೆ.

                                    ಇನ್ನು ಮುಂದೆ ಪ್ರಣವನ ಚಿತ್ತದ ಮಂಥನ ಮುಂದುವರೆಯಲಿದೆ.......

      ಅಂದಿದ್ದ ಸಾಹಿತ್ಯೋತ್ಸಾಹ, ಕೆಲವು ಗೆಳೆಯರ, ಬಂಧುಗಳ, ಅವಿರತ ಪ್ರೋತ್ಸಾಹದ ಫಲಸ್ವರೂಪವಾಗಿ ಇಂದಿಗೂ ಬತ್ತದೇ ಹಾಗೇ ಉಳಿದಿದೆ.....

       ಸಾಹಿತ್ಯವನ್ನು ಉಳಿಸಿ - ಬೆಳೆಸುವಲ್ಲಿನ ಅಳಿಲು ಸೇವೆಯ ಕೃತಕೃತ್ಯತೆಯ ಕರ್ತವ್ಯದ ಭಾರ ನನ್ನ ಮೇಲಿರುವ ಕಾರಣ, ಅವಿನಾಭಾವ ಸಾಹಿತ್ಯಿಕ ಸಂಬಂಧದ ಶೃಂಖಲೆಯನ್ನು ಸುತ್ತಿಕೊಂಡು ಹಿಂತಿರುಗಿ ಮುನ್ನಡೆಯುತ್ತಿದ್ದೇನೆ.

    ನಿಮ್ಮೆಲ್ಲರ ಆಶೀರ್ವಾದ ಮೊದಲಿನಂತೆಯೇ ನನ್ನ ಮೇಲೆ ಮುಂದೂ ಇರಲಿ ಎಂದು ಬಯಸುವ ಕನ್ನಡಾಂಬೆಯ ದಾಸರಲ್ಲೊಬ್ಬನಾದ ನಿಮ್ಮೆಲ್ಲರ ಪ್ರೀತಿಯ....

                                                                                                                                                 - ಪ್ರಣವ 
                                                                                                                                               16/05/2013



No comments:

Post a Comment