ತರ್ಕಿಸಿಕೋ ನಿನ್ನ ನೀನೇ,
ತರ್ಕಿಸುವ ಮುನ್ನ ಬೇರೊಬ್ಬನನು,
ಅಂದು ನೀನಾಗುವೆ ಆತ್ಮಾವಲೊಕಿ,
ತಣಿವುದು ನಿನ್ನೊಳಗಿನ ದ್ವೇಷದ ಬೆಂಕಿ
ನೀಡು ದ್ವೇಷಾಸೂಯಕ್ಕೆ ಚಿರವಿರಾಮ
ಅಂದು ನಿನಗೆ ದೊರೆವುದು, ಪ್ರಣವನ ಪ್ರಣಾಮ
ಆ ದುಂಬಿಗಳ ಝೇಂಕಾರದಿಂದ,
ಮನವೆಂದಿತು, ‘ದೊರಕಿದೆ ಎನಗಿಂದು ವಿರಾಮ’;
ನಾ ವಂದಿಸುವೆ ದುಂಬಿಗಳಿಗೆ ಆನಂದದಿಂದ
‘ನಿಮಗಿದೋ ಅರ್ಪಿಸುವೆ, ಪ್ರಣವನ ಪ್ರಣಾಮ’.
ಚಂದಿರನ ಮೊಗದಲ್ಲಿ, ನಾ ಕಂಡೆ ರತಿಯ!
ನನಗನಿಸಿತು ‘ಆಕೆಯೂ ಕಾಣುತ್ತಿದ್ದಾಳೆ, ತನ್ನ ಪ್ರತಿಬಿಂಬವನು,
ನನ್ನ ಈ ಕಣ್ಣೆಂಬ ಕೊಳದಲ್ಲಿ, ಕೊರೆವ ಚಳಿಯಲ್ಲಿ’.
ಮನಸೂರೆಗೊಂಡಳು ನನ್ನ ಚಿತ್ತವನು ಪೂರ್ತಿಯಾಗಿ
ಉಳಿಯಲಿಲ್ಲ ನನ್ನಲ್ಲಿ ಏನೂ ಅವಳನ್ನು ಬಿಟ್ಟು!
ಹಾಕಿಕೊಂಡೆ ನನಗೆ ನಾನೇ ಒಂದು ಅಲ್ಪವಿರಾಮ,
ಆಕೆಗಿದೋ ಅರ್ಪಿಸುವೆ ಪ್ರಣವನ ಪ್ರಣಾಮ.
ಕೊರೆವ ಚಳಿಯಲ್ಲಿ, ತೊರೆಯ ತಂಪು ಮಂಜಿನಂತೆ;
ಉರಿವ ಬಿಸಿಲಲ್ಲಿ, ಉರಿಬೆಂಕಿಯಿಟ್ಟಂತೆ;
ಸುರಿವ ಮಳೆಯಲ್ಲಿ, ಭೋರ್ಗರೆವ ಪ್ರವಾಹದಂತೆ
ಲಗ್ಗೆಯಿಟ್ಟಳು ನನ್ನ ಮನಕ್ಕೆ, ಕಾಣದ ಮೊಗದಂತೆ, ಕೈಗೆಟುಕದ ಪುಷ್ಪದಂತೆ.
ಆಕೆಗಿದೋ ಅರ್ಪಿಸುವೆ ಪ್ರಣವನ ಪ್ರಣಾಮ,
ಬಯ್ಯದಿರಿ ನನಗೆ, “ಅಯ್ಯೋ ರಾಮ ರಾಮ”
-
ಪ್ರಣವ, 18/03/2012
ತುಂಬಾ ಚೆಂದ .. ಹಾಗು ವರ್ಣನೆ ಅರ್ಥಪೂರ್ಣವೂ ಹೌದು .. :)
ReplyDeleteಚೆನ್ನಾಗಿದ್ದು ಪ್ರಸಾದ್ :)
ReplyDelete