ಮಿಂಚುತಿವೆ ನಯನಗಳು ನಕ್ಷತ್ರದಂತೆ
ಕಂಡು ಆಕೆಯ ರೂಪವನು
ಶೇಖರನೊಂದಿಗಿರುವ ರೋಹಿಣಿಯಂತೆ,
ಇರಬಾರದೇ ನನ್ನ ಕನಸಿನ ರಾಣಿ ನನ್ನೊಂದಿಗೆ?
ನನ್ನ ಹೃದಯದ ಮೇಲಾಕೆಯು ಒತ್ತಿರುವ ಪಾದದ ಗುರುತುಗಳವು,
ಅದಲ್ಲಿಗೆ ಹೇಗೆ ತಲುಪಿತೆಂಬ ಪ್ರಶ್ನೆ ನಿಮ್ಮದಲ್ಲವೇ?
ಮನದ ಭಾವನಾತ್ಮಕ ಕಲ್ಪನೆಗಳಿಗಿಲ್ಲ ಎಲ್ಲೆ
ನಿಮ್ಮ ಪ್ರಕಾರ ಬೇರೆಯೇನಿರಬಹುದು? ನಾನು ಹೇಗೆ
ಬಲ್ಲೆ?
ನಿಮಗಿರಬಹುದುಲ್ಲವೇ ಸಂದೇಹ ಯಾರೀ ನಾರಿ?
ನಾ ವರ್ಣಿಸುತಿರುವ ಪೋರಿ?
ತಿಳಿದಿದ್ದರೆ ಅವಳ್ಯಾರೆಂದು ನನಗೆ,
ಉಲ್ಲೇಖಿಸಿ ತಿಳಿಸುತ್ತಿರಲಿಲ್ಲವೇ ನಾ ನಿಮಗೆ?
- ಪ್ರಣವ 20/03/2012
11:55 P.M to 12:13 A.M (21/03/2012)
No comments:
Post a Comment