ಕಣ್ಣಂಚಿನಲಿ ಸುಳಿದಾಡುತಿವೆ ಹಲವು
ಕಾಮನೆಗಳು
ಸಿದ್ಧಿಯಾಗಲವು ಬೇಡು ಗುರುವಿನ
ಚರಣದೊಳು
ನಂಬಿಕೆಯಿಡು ಶ್ರೀಧರನ ಪಾದದೊಳು
ಇಷ್ಟಾರ್ಥ ಈಡೇರ್ವುದು
ಮುಚ್ಚಿತೆರೆಯುವುದರೊಳಗೆ ಕಣ್ಣ ಪಟಲಗಳು
ಗುರುವಿನಾದೇಶ ಸಿಗುವರೆಗಿಲ್ಲ ಮುಕುತಿ
ಅವನೊಳಿಡು ಅನಂತ ಭಕುತಿ
ಕೊನೆಗೊಂದು ದಿವಸವದು ದೊರೆವುದಪ್ಪಣೆ
ಕೊನೆಗೊಂದು ದಿವಸವದು ದೊರೆವುದಪ್ಪಣೆ
ಅಂದು ಆಗಿರುವುದು ನಿನ್ನ ಮನದರ್ಪಣೆ
ಪ್ರಣವ 24/03/2012
11:11 P.M. to 11:35 P.M.