ಬಾನೆತ್ತರದಲಿ ತೇಲಾಡುವ ಬಾನಾಡಿಯು ನೀನು;
ಕಣ್ಣಂಚಿಗೆ ಬೆರಗುಣಿಸುವ ಸುಳಿಮಿಂಚು ನೀನು;
ಫಳಫಳನೆ ಮಿನುಗುತಲಿಹ ನಕ್ಷತ್ರವು ನೀನು;
ನನ್ನೆದೆಯ ಸೀಳಿ ಒಳ ಹೋಕ್ಕಿರುವೆ, ಹೊರ ಬಾರದಿರು ಇನ್ನು!
ಎದೆಬಾನಲಿ ಕವಿದಿರುವ ಮುಗಿಲ
ಸಾಲು ನೀನು;
ಸುರಿದು ಪ್ರೇಮ ವರ್ಷಧಾರೆ, ತಣಿಸು ನನ್ದೆದೆಯನ್ನು!
ಗುಡುಗು, ಸಿಡಿಲ್ಮಳೆಗಿನ್ನು ಎದೆಯೊಡ್ಡಿ ನಿಲ್ಲುವೆನು;
ಭಯವಿಲ್ಲ ನನಗೇನೂ, ಜೊತೆಯಿರುವೆಯಲ್ಲ ನೀನು!
ಸುರಿದು ಪ್ರೇಮ ವರ್ಷಧಾರೆ, ತಣಿಸು ನನ್ದೆದೆಯನ್ನು!
ಗುಡುಗು, ಸಿಡಿಲ್ಮಳೆಗಿನ್ನು ಎದೆಯೊಡ್ಡಿ ನಿಲ್ಲುವೆನು;
ಭಯವಿಲ್ಲ ನನಗೇನೂ, ಜೊತೆಯಿರುವೆಯಲ್ಲ ನೀನು!
ನನ್ನಂತರಂಗವನು ಆವರಿಸಿಹೆ
ನೀನು!
ನಿನ್ನ ನನ್ನ ಮನದ ನಡುವೆ ಅಂತರವೇನಿನ್ನು?
ಮರೆತು ಈ ಲೋಕವನ್ನು, ಗೋಜುಗೌಜಿಗಳನ್ನು,
ಬೆರೆತು ನನ್ನಲ್ಲೇ, ನಾನಾಗು ನೀನು!
ನಿನ್ನ ನನ್ನ ಮನದ ನಡುವೆ ಅಂತರವೇನಿನ್ನು?
ಮರೆತು ಈ ಲೋಕವನ್ನು, ಗೋಜುಗೌಜಿಗಳನ್ನು,
ಬೆರೆತು ನನ್ನಲ್ಲೇ, ನಾನಾಗು ನೀನು!
ಕಣ್ಣ ಮುಂದೆ ಬಂದೊಮ್ಮೆ ತೋರು ನಿನ್ನ ನಯನವನು
ನಿನ್ನ ಕಣ್ಣ ಬಿಂಬದಲಿ ನನ್ನೆ ನಾನು ಕಾಣುವೆನು
ಕಂಡು ನನ್ನ ನಿನ್ನಲಿ, ಸುರಿಸುವೆನೊಂದು ಬಿಂದುವನು!
ಹೆದರಬೇಡ ಚಿನ್ನ, ನಾನಿನ್ನ ಬಿಡಲಾರೆನಿನ್ನು!